Monday 11 September 2017

ಗುರು ಗ್ರಹದ ಸಂಚಾರ ಫಲ -ಸೆ.12 ತುಲಾ ರಾಶಿಗೆ ಗುರು ಪ್ರವೇಶ, ಈ ಸಮಯದಲ್ಲಿ ಯಾವ ರಾಶಿಗೆ ಏನು ವಿಶೇಷ ಎಂದು ತಿಳಿದುಕೊಳ್ಳಿ..!!

ಸೆ.12 ತುಲಾ ರಾಶಿಗೆ ಗುರು ಪ್ರವೇಶ, ಈ ಸಮಯದಲ್ಲಿ ಯಾವ ರಾಶಿಗೆ ಏನು ವಿಶೇಷ ಎಂದು ತಿಳಿದುಕೊಳ್ಳಿ..!!

ಗುರು ಗ್ರಹದ ಸಂಚಾರ ಫಲ

ಇದೇ ಸೆಪ್ಟೆಂಬರ್ 12ನೇ ತಾರೀಖು ಗುರು ಗ್ರಹವು ತಾನಿದ್ದ ಮನೆಯಿಂದ ಅಂದರೆ ಕನ್ಯಾರಾಶಿಯಿಂದ ತುಲಾರಾಶಿ ಸಂಚಾರಮಾಡುತ್ತಾನೆ.
ಗುರುಗ್ರಹವು 12.09.2017 ರಿಂದ 11.10.2017 ವರೆಗೆ ತುಲಾರಾಶಿಯಲ್ಲೆ ಸ್ಥಿತನಾಗುತ್ತಾನೆ. ಈ ಸಮಯದಲ್ಲಿ 12 ರಾಶಿಗೆ ಶುಭ ಅಶುಭ ಫಲಗಳನ್ನು ತಿಳಿಸಲಾಗಿದೆ.

ಮೇಷರಾಶಿ- ಗುರುಗ್ರಹವು ಮೇಷಕ್ಕೆ ಸಪ್ತಮದ(7) ದೃಷ್ಠಿಬೀಳುವುದರಿಂದ ಹಿಂದೆ ಇದ್ದ ತಾಪತ್ರಯಗಳು ಮರೆಯಾಗಿ ಸ್ವಲ್ಪ ನೆಮ್ಮದಿಯ ಉಸಿರನ್ನು ಬಿಡುವಿರಿ, ಶರೀರ ಸೌಖ್ಯ, ಆರೋಗ್ಯ, ಸಂತೋಷ, ಸನ್ಮಾನ, ಕಾರ್ಯಸಿದ್ದಿ, ಪುತ್ರಲಾಭ, ಉದ್ಯೋಗ ಮತ್ತು ಮದುವೆಯಾಗುವ ಸಮಯಗಳು ಕೂಡಿ ಬರುವುದು.

ವೃಷಭರಾಶಿ- ಗುರುಗ್ರಹವು ವೃಷಭದಿಂದ ಷಷ್ಟಮ(6) ದಲ್ಲಿರುವುದರಿಂದ ಆರೋಗ್ಯಸಮಸ್ಸೆ ಹೆಚ್ಚಾಗುವುದು, ಬಂಧುಮಿತ್ರರೊಡನೆ ಕಲಹಗಳು, ಅಗ್ನಿಭಯ, ಅಧಿಕಾರಿಗಳಿಂದ ತೊಂದರೆ, ಮನೆಯಲ್ಲಿ ಕಳ್ಳತನವಾಗುವು, ಸಂತಾನನಷ್ಟ, ದುಃಖಹೆಚ್ಚುವುದು.

ಮಿಥುನರಾಶಿ- ಗುರುಗ್ರಹವು ಮಿಥುನದಿಂದ ಪಂಚಮ(5) ದಲಿದ್ದು ಗುರುವಿನಿಂದ ಆಕಸ್ಮಿಕ ಧನಲಾಭ, ಭೋಗ ವೈಭವ, ಶುಭಕಾರ್ಯಗಳನ್ನು ಪ್ರೋತ್ಸಾಹಿಸುವುದು, ಸಂತಾನ ಸುಖ, ಲಾಭ, ಸಜ್ಜನರ ಸಹವಾಸ, ಮಕ್ಕಳಿಂದ ಸುಖ, ಸನ್ಮಾನಗಳು ಹೆಚ್ಚುವುದು.

ಕಟಕರಾಶಿ- ಗುರುಗ್ರಹವು ಕಟಕದಿಂದ ಚತುರ್ಥ(4)ದಲಿದ್ದು ಗುರುವಿನಿಂದ ಸಧಾರಣ ಫಲ ಮಾನಸಿಕ ಚಂಚಲತೆ, ಪರಜನಯಾಚನೆ
ಪರಗೃಹ, ನೀಚಜನರ ಸಹವಾಸ,ಪಿತ್ರಾರ್ಜಿತ ಆಸ್ತಿ ಮಾರಾಟ,ಅರಿವಿಗೆ ಬಾರದೆಯೇ ಕೆಲವು ತೊಂದರೆಗಳು.

ಸಿಂಹರಾಶಿ- ಗುರುಗ್ರಹವು ಸಿಂಹದಿಂದ ತೃತೀಯ(3) ದಲಿದ್ದು ಗುರುವಿನಿಂದ ಸ್ವಜನರೊಡನೆ ಕಲಹ, ಕೈಹಾಕಿದ ಕೆಲಸದಲ್ಲಿ ವಿಘ್ನಗಳು, ದುಷ್ಟಕಾರ್ಯದಲ್ಲಿ ಆಸಕ್ತಿ, ಹಣದ ಅಡಚಣೆಗಳು, ತಿರುಗಾಟ ಹೆಚ್ಚುವುದು.

ಕನ್ಯಾರಾಶಿ- ಗುರುಗ್ರಹವು ಕನ್ಯಾದಿಂದ ದ್ವಿತೀಯ(2) ದಲಿದ್ದು ಗುರುವಿನಿಂದ ಶರೀರ ಸುಖ, ಕೀರ್ತಿವೃದ್ದಿ, ಧನಧಾನ್ಯವೃದ್ದಿ, ಸರ್ವಪುಣ್ಯ ಕಾರ್ಯಾಚರಣೆ, ಮನೆಯಲ್ಲಿ ಶುಭಕಾರ್ಯ, ನಿಮ್ಮ ಮಾತು ಎಲ್ಲರೂ ಒಪ್ಪುವರು.

ತುಲಾರಾಶಿ- ಗುರುಗ್ರಹವು ತುಲಾರಾಶಿಯಲ್ಲೆ ಇರುವುದರಿಂದ ಶುಭಕಾರ್ಯಗಳಿಗೆ ಜಯವಾಗುವುದು, ವಿವಾಹ, ಸಂತಾನಲಾಭ,
ಅಧಿಕಾರ ಸ್ಥಾನ, ಸನ್ಮಾನಗಳು ದೊರಕುವುದು, ವಾಹನಗಳನ್ನು ಕರೀದಿಸುವುದು, ಸಜ್ಜನರ ಸಹವಾಸ, ಧಾರ್ಮಿಕಕ್ಷೇತ್ರದಲ್ಲಿ ಒಳ್ಳೆಯ ಹೆಸರು, ದೇವರ ಸೇವೆ ಮಾಡುವುದು, ವಿದೇಶ ಪ್ರಯಾಣವಾಗುವುದು.

ವೃಶ್ಚಿಕರಾಶಿ- ಗುರುಗ್ರಹವು ವೃಶ್ಚಿಕಕ್ಕೆ ದ್ವಾದಶ (12)ದಲಿದ್ದು ಧನನಾಶ, ಋಣಬಾಧೆ, ದರಿದ್ರತನ, ಸ್ಥಳಬದಲಾವಣೆ, ವಿದ್ಯಾಭ್ಯಾಸದಲ್ಲಿ ಅಡಚಣೆ, ಕೆಲಸ ಕಳೆದುಕೊಳ್ಳುವುದು, ಆರೋಗ್ಯದಲ್ಲಿ ಸಮಸ್ಸೆ, ನಿರುದ್ಯೋಗ, ತೊಂದರೆ ಮೇಲೆ ತೊಂದರೆಗಳು.

ಧನಸ್ಸುರಾಶಿ- ಗುರುಗ್ರಹವು ಧನಸ್ಸುವಿಗೆ ಏಕದಶ(11)ದಲಿದ್ದು ಧನಲಾಭ, ಪ್ರತಿಷ್ಠೆ ಹೆಚ್ಚುವುದು, ತೀರ್ಥಕ್ಷೇತ್ರ ಯಾತ್ರೆ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಲಾಭ, ಶತೃಜಯ, ಸಂತಾನ ಭಾಗ್ಯ, ವಾಹನ ಖರೀದಿ, ಉದಾರಮನೋಭಾವ ಹೆಚ್ಚುವುದು.

ಮಕರರಾಶಿ- ಗುರುಗ್ರಹವು ಮಕರದಿಂದ ದಶಮ(10)ದಲಿದ್ದು ಧನನಾಶ, ಋಣಬಾಧೆ, ಚೊರಭಯ, ಸರ್ಕಾರದಿಂದ ಅಧಿಕಾರಿಗಳಿಂದ ತೊಂದರೆಗಳು, ವ್ಯಾಪಾರದಲ್ಲಿ ನಷ್ಟ, ಶತೃಭಯ, ಜನರವಿರೋಧಗಳು.

ಕುಂಭರಾಶಿ- ಗುರುಗ್ರಹವು ಕುಂಭದಿಂದ ನವಮ(9)ದಲಿದ್ದು ಶುಭಕಾರ್ಯ ಹೆಚ್ಚುವುದು, ತಂದೆಯ ಪ್ರೀತಿ, ಒಳ್ಳೆಯ ಸ್ಥಾನಗಳು, ಧನಧಾನ್ಯ ಲಾಭ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನೆಯವರಿಂದ ಸಂತೋಷ, ಸ್ತ್ರೀಯರಿಂದ ಶುಭ.

ಮೀನರಾಶಿ- ಗುರುಗ್ರಹವು ಮಿನಕ್ಕೆ ಅಷ್ಟಮ(8)ದಲಿದ್ದು ಕೆಲಸದಲ್ಲಿ ಅಡಚಣೆಗಳು, ಆರೋಗ್ಯದಲ್ಲಿ ಸಮಸ್ಸೆ, ಅಧಿಕ ತಿರುಗಾಟ, ಖರ್ಚುಹೆಚ್ಚುವುದು, ಮನಸ್ಸಿಗೆ ನೆಮ್ಮದಿಯಿಲ್ಲದಿರುವುದು, ದುಷ್ಟಜನರಸಹವಾಸ, ಕೆಟ್ಟಚಟ, ಸಂತಾನನಷ್ಟ, ವಿವಾಹದಲ್ಲಿ ಅಡಚಣೆಗಳಾಗುವುದು.

                                       - ವೇಣು ಭರದ್ವಾಜ್
                           ಶ್ರೀ ಯತಿರಾಜ ಜ್ಯೋತಿಷಾಲಯಂ
                  #1/1368, ADCC ಬ್ಯಾಂಕ್ ಕಾಲೋನಿ,
                    ರುದ್ರಂಪೇಟ , ಅನಂತಪುರ - 515002
                                Ph: +91  9440470946